ಯಾಗಿ ಚಂಡಮಾರುತದಿಂದಾಗಿ ವಿಯೆಟ್ನಾಂನಲ್ಲಿ ಭಾರೀ ಮಳೆಯಾಗಿದೆ
ವಿಯೆಟ್ನಾಂನಲ್ಲಿ 'ಯಾಗಿ' ಚಂಡಮಾರುತದಿಂದಾಗಿ ಭಾರೀ ಮಳೆಯಾಗುತ್ತಿರುವಾಗ ಉತ್ತರ ವಿಯೆಟ್ನಾಂನಲ್ಲಿ ನದಿಯೊಂದಕ್ಕೆ ನಿರ್ಮಿಸಲಾದ ಸೇತುವೆಯೊಂದು ಕ್ಷಣಾರ್ಧದಲ್ಲಿ ಕುಸಿದಿದೆ. ಲಾರಿ, ಕಾರು, ಬೈಕ್ ಸೇರಿದಂತೆ 10ಕ್ಕೂ ಹೆಚ್ಚು ವಾಹನಗಳು ನದಿಗೆ ಬಿದ್ದಿವೆ. ನದಿಗೆ ಬಿದ್ದವರಲ್ಲಿ 3 ಮಂದಿಯನ್ನು ಇದುವರೆಗೆ ರಕ್ಷಿಸಲಾಗಿದೆ; ಉಳಿದವರಿಗಾಗಿ ಹುಡುಕಾಟ ತೀವ್ರವಾಗಿದೆ.