ಸಮನಾಗಿರಬೇಕು
ಸಮನಾಗಿರಬೇಕು
ಶಿಕ್ಷಣ ಸಂಸ್ಥೆಗಳು ಮತ್ತು ಸ್ಮಶಾನಗಳು ಸೇರಿದಂತೆ ಸರ್ಕಾರಿ ಸಾರ್ವಜನಿಕ ಸಂಸ್ಥೆಗಳ ಬಳಕೆಯಲ್ಲಿ ಯಾವುದೇ ತಾರತಮ್ಯ ಮಾಡಬಾರದು ಎಂದು ತಮಿಳುನಾಡು ಆದಿ ದ್ರಾವಿಡ ಮತ್ತು ಬುಡಕಟ್ಟು ರಾಜ್ಯ ಆಯೋಗವು ತಮಿಳುನಾಡು ಸರ್ಕಾರಕ್ಕೆ ಶಿಫಾರಸು ಮಾಡಿದೆ. ಸರ್ಕಾರಿ ಕಚೇರಿಗಳು, ಆಸ್ಪತ್ರೆಗಳು ಮತ್ತು ಶಾಲೆಗಳು ಎಲ್ಲ ಜನರ ಉಪಯೋಗಕ್ಕೆ ಬರಬೇಕು. ಭವಿಷ್ಯದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಸರಕಾರಿ ಕಚೇರಿಗಳು ಎಲ್ಲ ಜನರಿಗೆ ಸಮಾನವಾಗಿ ದೂರವಿರುವಂತೆ ಸೂಚಿಸಲಾಗಿದೆ.