ಮೆಕ್ಕಿ ಕೆಲಸ ಕೈಮೋಸ ಮಾಡಿತು


ಚೋಂಗಿಂಗ್ ಪ್ರದೇಶಕ್ಕೆ ಸೇರಿದ ಯುವತಿ ಒಬ್ಬಳು ಪೋಷಾ ಪ್ರಾಣಿಗಳನ್ನು ಸಾಕುವುದರಲ್ಲಿ ಆಸಕ್ತಿ ಹೊಂದಿದ್ದಾಳೆ. ಈ ಕಾರಣದಿಂದ ಅವಳು ತನ್ನ ಮನೆಯಲ್ಲೇ 9 ಬೆಕ್ಕುಗಳನ್ನು ಸಾಕುತ್ತಿದ್ದಾಳೆ. ಅವಳು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಕೆಲಸದ ಒತ್ತಡದಿಂದಾಗಿ, ತನ್ನ ಆಸೆಯಿಂದ ಸಾಕುತ್ತಿದ್ದ ಬೆಕ್ಕುಗಳಿಗೆ ಪ್ರತ್ಯೇಕ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ ಎಂದುಕೊಂಡಳು. ಈ ಕಾರಣದಿಂದ ಅವಳು ತನ್ನ ಕೆಲಸಕ್ಕೆ ರಾಜೀನಾಮೆ ನೀಡಲು ತೀರ್ಮಾನಿಸಿದಳು. ನಂತರ, ತನ್ನ ಲ್ಯಾಪ್‌ಟಾಪ್‌ನಲ್ಲಿ ರಾಜೀನಾಮೆ ಪತ್ರವನ್ನು ಟೈಪ್ ಮಾಡಿದ್ದಳು. ಅಲ್ಲದೆ, ಆ ಪತ್ರವನ್ನು ಆಫೀಸ್ ಬಾಸ್‌ಗೆ ಕಳುಹಿಸಲು ಇ-ಮೇಲ್ ವಿಳಾಸವನ್ನು ಆಯ್ಕೆ ಮಾಡಿಟ್ಟಿದ್ದಳು.
ಆ ಸಂದರ್ಭದಲ್ಲಿ ಅವಳ ಮನಸ್ಸು ಏಕಾಏಕಿ ಬದಲಾಯಿತು. ಅಂದರೆ, ಬೆಕ್ಕುಗಳ ಮೇಲೆ ಪ್ರೀತಿ ತೋರಿಸಲು ಕೆಲಸಕ್ಕೆ ರಾಜೀನಾಮೆ ಕೊಟ್ಟರೆ ಜೀವನದ ಖರ್ಚಿಗೆ ಏನು ಮಾಡುವುದು? ಎಂದು ಆಲೋಚಿಸಿದಳು. ಹೀಗಾಗಿ ಅವಳು ಆ ರಾಜೀನಾಮೆ ಪತ್ರವನ್ನು ಕಳುಹಿಸದೇ ಹಾಗೆಯೇ ಬಿಟ್ಟಳು. ಲ್ಯಾಪ್‌ಟಾಪ್‌ ಅನ್ನು ಆಫ್ ಮಾಡಲಿಲ್ಲ. ಆ ಸಮಯದಲ್ಲಿ, ಅವಳು ಸಾಕುತ್ತಿದ್ದ ಬೆಕ್ಕುಗಳಲ್ಲಿ ಒಂದು ಲ್ಯಾಪ್‌ಟಾಪ್ ಹತ್ತಿ ‘ಎಂಟರ್’ ಬಟನ್‌ ಅನ್ನು ಒತ್ತಿತು. ಈ ಘಟನೆ ಚೀನಾದಲ್ಲಿ ಎಲ್ಲರನ್ನು ಆಶ್ಚರ್ಯಕ್ಕೆ ಗುರಿಮಾಡಿದೆ.